
ನವದೆಹಲಿ: ಪದ್ಮಶ್ರೀ ಪುರಸ್ಕೃತ ಸುದರ್ಶನ್, ಇತಿಹಾಸಪ್ರಸಿದ್ಧ ಕೊನಾರ್ಕ್ ದೇವಾಲಯ ದ ಚಕ್ರವನ್ನ ಮರಳಿನಲ್ಲಿ ರಚಿಸಿದ್ದಾರೆ. ಈ ಅದ್ಭುತ ಕಲೆಯ ಫೋಟೋಗಳನ್ನ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡ್ ಆರ್ಟ್ ಎಂದಾಕ್ಷಣ ಥಟ್ ಅಂತ ನೆನಪಾಗೋದೇ ಸುದರ್ಶನ್ ಪಟ್ನಾಯಕ್. ಒಡಿಶಾ ಮೂಲದವರಾದ ಖ್ಯಾತ ಕಲಾವಿದ ಸುದರ್ಶನ್, ಸದ್ಯ ಜಪಾನ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಕಲೆ ಪ್ರದರ್ಶನದಲ್ಲಿ ತಮ್ಮ ಪ್ರತಿಭೆಯನ್ನೂ ತೋರಿಸಿದ್ದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಕೊನಾರ್ಕ್ನ ಸೂರ್ಯ ದೇವಾಲಯದ ಸ್ಯಾಂಡ್ ಆರ್ಟ್ ಮಾಡಿದ್ದಾರೆ.
ಜಪಾನ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಕಲೆ ಪ್ರದರ್ಶನದಲ್ಲಿ ವಿಶ್ವದಾದ್ಯಂತ ಸುಮಾರು 21 ಕಲಾವಿದರು ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುದರ್ಶನ್ ತಮ್ಮ ಈ ಸ್ಯಾಂಡ್ ಆರ್ಟ್ನಲ್ಲಿ ಅತ್ಯಂತ ಸಣ್ಣ ಪುಟ್ಟ ಡೀಟೇಲ್ಸ್ ಕೂಡ ಅದ್ಭುತವಾಗಿ ಚಿತ್ರಿಸಿದ್ದಾರೆ. ಇನ್ನು ಈ ಸ್ಯಾಂಡ್ ಆರ್ಟ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಜನರು ಶ್ಲಾಘಿಸಿದ್ದಾರೆ.
